ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ, ಅರೆಯೂರು, ತುಮಕೂರು

ಭಕ್ತರ ಅನುಭವಗಳು

ಶ್ರೀ ಸೂರಪ್ಪ
S/o ಶ್ರೀ ಮದ್ದಿಗನಾಯ್ಕ


ನನಗೆ ಸಕ್ಕರೆ ಖಾಯಿಲೆ ಜಾಸ್ತಿಯಾಗಿ ಸುಸ್ತಾಗುತ್ತಿತ್ತು. ಕೆಲಸ ಮಾಡಲು ಆಗುತ್ತಿರಲಿಲ್ಲ. ನರ್ಸಿಂಗ್ ಹೋಂಗೆ ಹೋಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ಕಮ್ಮಿಯಾಗಲಿಲ್ಲ. ಆದ್ದರಿಂದ ನಮ್ಮಊರಿನ ಶ್ರೀ ವೈ...

Latest News - ಸುದ್ಧಿಗಳು

  • Facebook: areyurutemples
  • Twitter: areyurutemples
  • External Link: areyurusuresh.blogspot.com

ಇದುವರೆಗಿನ ವೀಕ್ಷಕರ ಸಂಖ್ಯೆ

Content View Hits : 47112

ಲೈವ್ ವೆಬ್ ವೀಕ್ಷಕರ ಸಂಖ್ಯೆ

We have 52 guests online

Font Problem?

This Website is in KANNADA Language and uses UNICODE [UTF-8 encoding] Font for its contents display. If you unable to read the content, or the content displays like ??????? or □ □ □ □ □, please install / replace this TUNGA unicode font to your computer. Set your browser to UTF-8 Encoding. Please refer the corresponding manuals of your browsers and Suitable Unicode fonts installation instructions for your Operating Systems.

ಮುಖಪುಟ ಆಗಬೇಕಾದ ಅಭಿವೃದ್ಧಿ ಕಾರ್ಯಗಳು
ಶ್ರೀಕ್ಷೇತ್ರದಲ್ಲಿ ತ್ವರಿತವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು

ವಸತಿ ಗೃಹಗಳ ಸಮುಚ್ಛಯಗಳು, ಸಾರ್ವಜನಿಕ ಸ್ನಾನ ಘಟ್ಟಗಳು ಮತ್ತು ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ:
ಇಲ್ಲಿನ ಪದ್ಧತಿಯ ಪ್ರಕಾರ ರೋಗಿಗಳು ಸತತವಾಗಿ ಕೆಲವು ದಿವಸಗಳು ಅಂದರೆ ಅವರ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ಶುಭಸೂಚನೆ ಗೊತ್ತಾಗುವವರೆಗೆ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಬೇಕಾಗುತ್ತದೆ. ಆದರೆ ಹಾಗೆ ದೇವಸ್ಥಾನದ ಹತ್ತಿರ ವಾಸ್ತವ್ಯ ಮಾಡಲು ಯಾವುದೇ ವಸತಿ ಗೃಹಗಳು ಇರುವುದಿಲ್ಲ. ಅನೇಕ ರೋಗಿಗಳು ಇಲ್ಲಿ ಬಂದು ವಾಸವಾಗಿದ್ದು ಶ್ರೀ ವೈದ್ಯನಾಥೇಶ್ವರಸ್ವಾಮಿಗೆ ನಿರಂತರ ಪೂಜೆ ಹಾಗೂ ಸೇವೆ ಮಾಡಿ ತಮ್ಮ ಖಾಯಿಲೆಗಳನ್ನು ವಾಸಿ ಮಾಡಿಕೊಂಡು ಹೋಗಲು ಇಚ್ಛಿಸುತ್ತಾರೆ. ಆದ್ದರಿಂದ ದೇವಸ್ಥಾನದ ಸೇವಾ ಸಮಿತಿಯವರು ತಯಾರಿಸಿರುವ ವಸತಿ ಗೃಹಗಳ ಸಮುಚ್ಛಯದ ನಕ್ಷೆ ಪ್ರಕಾರ (According Residential Quarters Plan) ಕೊಠಡಿಗಳನ್ನು ದಾನಿಗಳು ನಿರ್ಮಾಣ ಮಾಡಿಸಿದರೆ ರೋಗಿಗಳಿಗೆ ಮತ್ತು ಭಕ್ತರಿಗೆ ಅನುಕೂಲವಾಗುತ್ತದೆ. ಆಸಕ್ತ ದಾನಿಗಳು ದಯಮಾಡಿ ಮುಂದೆ ಬಂದು ವಸತಿ ಗೃಹಗಳು, ಸಾರ್ವಜನಿಕ ಸ್ನಾನ ಘಟ್ಟಗಳು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲು ಉದಾರವಾಗಿ ಧನಸಹಾಯ ಮಾಡಬೇಕಾಗಿ ಪ್ರಾರ್ಥನೆ. ಯಾವುದೇ ಆಸಕ್ತ ಧರ್ಮದತ್ತಿ ಸಂಸ್ಥೆಗಳು, ಭಕ್ತರು, ದಾನಿಗಳು ತಾವೇ ಮುಂದೆ ಬಂದು ವಸತಿ ಗೃಹಗಳನ್ನು ಅವರುಗಳ ಹೆಸರಿನಲ್ಲಿ ನಿರ್ಮಿಸಿಕೊಡಬೇಕಾಗಿ ಪ್ರಾರ್ಥನೆ.

ಭೋಜನಶಾಲೆಯ ನಿರ್ಮಾಣದ ಅವಶ್ಯಕತೆ:


ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರು ಇಲ್ಲಿಗೆ ಬರುವ ಭಕ್ತರಿಗೆ ಉಚಿತವಾಗಿ ಅನ್ನದಾಸೋಹ (ಊಟದ ವ್ಯವಸ್ಥೆ) ನಡೆಸುತ್ತಿರುತ್ತಾರೆ. ದಾನಿಗಳು ಕೊಡುವ ಧನ ಸಹಾಯ ಮತ್ತು ದಾನವಾಗಿ ಕೊಡುವ ಅಕ್ಕಿ, ಬೇಳೆ, ಮುಂತಾದವುಗಳನ್ನು ಪಡೆದು ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಹೀಗೆ ಊಟದ ವ್ಯವಸ್ಥೆ ಮಾಡಲು ಅಲಾಯಿದೆಯಾಗಿ (Separate) ಒಂದು ಸುಸಜ್ಜಿತ ಭೋಜನ ಶಾಲೆ ಮಾಡಬೇಕಾಗಿದೆ. ಈಗ ಊಟದ ವ್ಯವಸ್ಥೆಯನ್ನು ದೇವಸ್ಥಾನದ ಪಕ್ಕದಲ್ಲಿರುವ ತಾತ್ಕಾಲಿಕವಾಗಿ ನಿರ್ಮಿಸಿರುವ ಚಿಕ್ಕ ಕಟ್ಟಡದಲ್ಲಿ ಉಚಿತ ಅನ್ನದಾಸೋಹ ನಡೆಸುತ್ತಿರುತ್ತಾರೆ.

ಕಲ್ಯಾಣ ಮಂಟಪ ನಿರ್ಮಾಣದ ಅವಶ್ಯಕತೆ:

ಈ ಭಾಗ ಜನರು ಮತ್ತು ಇಲ್ಲಿಗೆ ಬರುವ ಭಕ್ತರು ಪುಣ್ಯಕ್ಷೇತ್ರವೆಂದು ಇಲ್ಲಿ ಮದುವೆ ಕಾರ್ಯ ಮಾಡಲು ಆಪೇಕ್ಷೆ ಪಡುತ್ತಾರೆ. ಇಲ್ಲಿ ಕಲ್ಯಾಣ ಮಂಟಪ ಇರುವುದಿಲ್ಲ ವಸತಿ ಗೃಹಗಳನ್ನು ಭೋಜನ ಶಾಲೆ ಮತ್ತು ಕಲ್ಯಾಣ ಮಂಟಪದ ಕಟ್ಟಡ ನಿರ್ಮಾಣ ಮಾಡಿಕೊಡಬೇಕೆಂದು ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದರೂ ಸಹ ಪ್ರಯೋಜನವಾಗಿಲ್ಲ. ಆದ್ದರಿಂದ ಯಾವುದೇ ಆಸಕ್ತ ಧರ್ಮದತ್ತಿ ಸಂಸ್ಥೆಗಳು, ಭಕ್ತರು, ದಾನಿಗಳು ಉದಾರವಾಗಿ ಮೇಲ್ಕಂಡ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಡುವಂತೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರು ಹಾಗೂ ಅರೆಯೂರಿನ ಗ್ರಾಮಸ್ಥರು ಪ್ರಾರ್ಥಿಸುತ್ತಾರೆ.

ದೇವಸ್ಥಾನದವರು ಹಾಗೂ ಭಕ್ತಾಧಿಗಳು ಅನೇಕ ಬಾರಿ ಕೇಳಿಕೊಂಡಿದ್ದರೂ ಸಹಾ ಈವರೆಗೂ ನಮ್ಮ ಘನ ರಾಜ್ಯಸರ್ಕಾರದಿಂದ, ತುಮಕೂರು ಗ್ರಾಮಾಂತರ ಶಾಸಕರಿಂದ, ಕೇಂದ್ರ ಸಂಸತ್ ಸದಸ್ಯರ ನಿಧಿಯಿಂದ ಮೇಲಿನ ಯಾವುದೇ ನಿರ್ಮಾಣ ಕಾರ್ಯಗಳಿಗೆ ಯಾವುದೇ ಅನುದಾನ (Grants) ಸಿಕ್ಕಿಲ್ಲ.

ಹಾಲು ಮಲ್ಲೇಶ್ವರ ದೇವಾಲಯದ ಅಭಿವೃದ್ಧಿ:

 

ಈಗ ಕರ್ನಾಟಕ ಸರ್ಕಾರದವರು ಹೇಮಾವತಿ ನದಿ ನೀರನ್ನು ನಾಲೆಯ ಮೂಲಕ ಅರೆಯೂರು ಕೆರೆಗೆ ಹಾಯಿಸಿ ಕೆರೆಯನ್ನು ಅಭಿವೃದ್ಧಿಪಡಿಸುವುದರಿಂದ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವು ಕೆರೆಯ ನೀರಿನಲ್ಲಿ ಮುಳುಗಿ ಹೋಗಿದೆ. ಆದ್ದರಿಂದ ಸರ್ಕಾರದವರು ಬಸವಕಲ್ಯಾಣದ ಕೂಡಲಸಂಗಮೇಶ್ವರ ಸ್ವಾಮಿ ದೇವಸ್ಥಾನವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದಂತೆ ಇಲ್ಲಿಯೂ ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನವನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ವೈದ್ಯನಾಥೇಶ್ವರ ಸಾಮಿ ದೇವಾಲಯದಿಂದ ಹಾಲುಮಲ್ಲೇಶ್ವರ ಸ್ವಾಮಿಯ ಉದ್ಭವ ಮೂರ್ತಿಯಿರುವಲ್ಲಿಗೆ ನೇರವಾಗಿ ಒಂದು ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.