ಪೌರಾಣಿಕ ಹಿನ್ನೆಲೆ

0 Comments

 

ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನವಿರುವ ಪ್ರದೇಶವು ಒಂದು ತಪೋಭೂಮಿಯಾಗಿದೆ. ಅರೆಯೂರಿನಲ್ಲಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹಿಂದಿನವುಗಳು. ಆದರೆ ಈ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಶಿಲಾಶಾಸನವಾಗಲಿ, ಅಥವಾ ಅಧಿಕೃತ ಆಧಾರಿತ ಗ್ರಂಥವಾಗಲೀ ದೊರೆತಿರುವುದಿಲ್ಲ. ಆದರೆ ಅಂದಿನಿಂದ ಇಂದಿನವರೆವಿಗೂ ಮೌಖಿಕವಾಗಿ ಜನರುಗಳ ಬಾಯಿಂದ ಬಾಯಿಗೆ ಬಂದು ಪ್ರಚಾರದಲ್ಲಿರುವ ಮಾಹಿತಿಗಳ ಪ್ರಕಾರ ಈ ದೇವಸ್ಥಾನಗಳು ಇರುವ ಪ್ರದೇಶವು ಮೊದಲು ದಟ್ಟವಾದ ಅರಣ್ಯ ಪ್ರದೇಶವಾಗಿತ್ತಂತೆ. ಇಲ್ಲಿ ಕಾಡು ಗೊಲ್ಲರು ಅಲ್ಲಲ್ಲಿ ವಾಸ ಮಾಡಿಕೊಂಡು ಇದ್ದರಂತೆ. ಹಿಮಾಲಯ ಪರ್ವತದ ಕಡೆಯಿಂದ ಶ್ರೀ ದಧೀಚಿ ಮಹರ್ಷಿ ಹಾಗೂ ಇತರ ಋಷಿಗಳು ಬಂದು ಇಲ್ಲಿ ಆಶ್ರಮ ಮಾಡಿಕೊಂಡು, ತಪಸ್ಸು ಮಾಡಿಕೊಂಡು ಇದ್ದರಂತೆ, ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗುವನ್ನು ಪ್ರತಿಷ್ಠಾಪಿಸಿ ಒಂದಂಕಣದ ಚಿಕ್ಕದಾದ ಗರ್ಭಗುಡಿಯನ್ನು ಮಾತ್ರ ಕಟ್ಟಿದ್ದರಂತೆ. ಚೋಳ ರಾಜರ ಕಾಲದಲ್ಲಿ ದೇವಸ್ಥಾನವನ್ನು ವಿಸ್ತರಿಸಿ ಕಟ್ಟಿಸಿದರಂತೆ. ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿರುವ ಕಡೆ ಒಂದು ದಿವ್ಯ ಔಷಧಿ ಮರ ಬೆಳೆದಿತ್ತಂತೆ. ಋಷಿಗಳ ಆಶ್ರಮಕ್ಕೆ ಬರುವ ರೋಗಿಗಳಿಗೆ ಋಷಿಗಳು ದಿವ್ಯ ಔಷಧದ ಮರದ ಎಲೆಗಳಿಂದ ಆಯುರ್ವೇದ ಔಷಧಿ ತಯಾರಿಸಿಕೊಟ್ಟು ಅವರ ಖಾಯಿಲೆಗಳನ್ನು ವಾಸಿ ಮಾಡುತ್ತಿದ್ದರಂತೆ.

Related Posts

ಸ್ಥಳ ಪುರಾವೆಗಳು

ಋಷಿಮುನಿಗಳು ಇಲ್ಲಿ ಆಶ್ರಮ ಮಾಡಿಕೊಂಡುತಪಸ್ಸು ಮಾಡುತ್ತಿದ್ದಾರೆಂದು ಪುರಾವೆ.1986ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ…

ದೇವರ ಸರ್ಪ

.ಇದೇ ದೇವಾಲಯದ ಜಾಗದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ…

ಹೂವಿನ ಪ್ರಸಾದ

 ದೇವರ ಹೂವಿನ ಪ್ರಸಾದದಿಂದ ಭಕ್ತರು ಫಲಾಫಲಗಳನ್ನು ತಿಳಿಯುವ ವಿಧಾನ.   ಭಕ್ತರು ಇಲ್ಲಿಗೆ ಬಂದು ದೇವರಿಗೆ…