ಅರೆಯೂರಿಗೆ-ಮಾರ್ಗಗಳು
ಅರೆಯೂರಿಗೆ ಮಾರ್ಗಗಳು
ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ತಾಲ್ಲೂಕಿನ ಹಚ್ಚ ಹಸುರಿನಿಂದ ಆವರಿಸಿರುವ ಅರೆಯೂರು ಗ್ರಾಮದಲ್ಲಿದೆ. ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಈ ಪ್ರಸಿದ್ಧ ಯಾತ್ರಾಸ್ಥಳವು ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ (206) ನಲ್ಲಿ, ತುಮಕೂರಿನಿಂದ ಶಿವಮೊಗ್ಗದ ಕಡೆ ಪ್ರಯಾಣಿಸುವಾಗ ಸಿಗುವ ಮಲ್ಲಸಂದ್ರ ಗ್ರಾಮದಿಂದ ದಕ್ಷಿಣಕ್ಕೆ 8 ಕಿ.ಮೀ. ದೂರದಲ್ಲಿದೆ. ಮಲ್ಲಸಂದ್ರ ರೈಲು ನಿಲ್ದಾಣವೇ ಈ ಪ್ರದೇಶದ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಮಲ್ಲಸಂದ್ರದಿಂದ ದೇವಾಲಯಕ್ಕೆ ಉತ್ತಮ ಡಾಂಬರು ರಸ್ತೆ ಇದ್ದು, ಆಟೋ, ಟೆಂಪೋ ಅಥವಾ ಯಾವುದೇ ವಾಹನಗಳಲ್ಲಿ ಸುಲಭವಾಗಿ ತಲುಪಬಹುದು.
ಮಾರ್ಗಗಳು
ಬೆಂಗಳೂರು ಕಡೆಯಿಂದ ಬರುವವರು
ರಸ್ತೆ ಮಾರ್ಗ:
-
- ತುಮಕೂರು > ಮಲ್ಲಸಂದ್ರ > ಹಾಲನೂರು > ಅರೆಯೂರು
- ಅಥವಾ ಬೆಂಗಳೂರು > ನೆಲಮಂಗಲ > ಕುಣಿಗಲ್ > ಹೆಬ್ಬೂರು > ಸಿರಿವರ > ಅರೆಯೂರು
ರೈಲು ಮಾರ್ಗ:
-
- ಬೆಂಗಳೂರು ಕಡೆಯಿಂದ ಮಲ್ಲಸಂದ್ರ ರೈಲು ನಿಲ್ದಾಣ ತಲುಪಿ, ಅಲ್ಲಿ ಬಸ್ಸು ಅಥವಾ ಬೇರೆ ವಾಹನದ ಮೂಲಕ ಮಲ್ಲಸಂದ್ರ > ಹಾಲನೂರು > ಅರೆಯೂರು.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಪಶ್ಚಿಮ ಕರ್ನಾಟಕದಿಂದ ಬರುವವರು
ರಸ್ತೆ ಮಾರ್ಗ:
-
- ತಿಪಟೂರು > ಗುಬ್ಬಿ > ಮಲ್ಲಸಂದ್ರ > ಹಾಲನೂರು > ಅರೆಯೂರು.
ರೈಲು ಮಾರ್ಗ:
-
- ಬೀರೂರು / ಅರಸೀಕೆರೆ > ತಿಪಟೂರು > ಅಮ್ಮಸಂದ್ರ > ಗುಬ್ಬಿ > ಮಲ್ಲಸಂದ್ರ, ಅಲ್ಲಿಂದ ರಸ್ತೆ ಮೂಲಕ ಅರೆಯೂರು ತಲುಪಬಹುದು.
ಮೈಸೂರು, ಮಂಗಳೂರು ಅಥವಾ ದಕ್ಷಿಣ ಕರ್ನಾಟಕದಿಂದ ಬರುವವರು
ರಸ್ತೆ ಮಾರ್ಗ:
-
- ಮೈಸೂರು / ಮಂಗಳೂರು > ಕುಣಿಗಲ್ > ಹೆಬ್ಬೂರು > ಸಿರಿವರ > ಅರೆಯೂರು.
ಸಾರ್ವಜನಿಕ ಸಾರಿಗೆ ಸೌಲಭ್ಯಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC):
- ತುಮಕೂರು ಬಸ್ ನಿಲ್ದಾಣದಿಂದ ಅರೆಯೂರಿಗೆ ನೇರ ಸಾರಿಗೆ ಸೌಲಭ್ಯ ಪ್ರತಿ ಗಂಟೆಗೆ ಒಮ್ಮೆ ಲಭ್ಯವಿದ್ದು, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸ್‌ಗಳು ಸಂಚರಿಸುತ್ತವೆ.