ಭಕ್ತಾದಿಗಳಿಗೆ ವಿಶೇಷ ಸೂಚನೆಗಳು

ಭಕ್ತಾದಿಗಳಿಗೆ ವಿಶೇಷ ಸೂಚನೆಗಳು

KSRTC ಬಸ್ ಸೌಲಭ್ಯ

ತುಮಕೂರಿನಿಂದ ಅರೆಯೂರಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಪ್ರತಿ ಗಂಟೆಗೊಮ್ಮೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸರ್ಕಾರಿ ಬಸ್‌ಗಳ ವ್ಯವಸ್ಥೆಯಿದೆ.

ಪ್ಲಾಸ್ಟಿಕ್ ಮುಕ್ತ ಪ್ರದೇಶ

ದೇವಸ್ಥಾನದ ಸುತ್ತಮುತ್ತಲ ಪ್ರದೇಶವು ಪ್ಲಾಸ್ಟಿಕ್ ರಹಿತ ಪ್ರದೇಶವಾಗಿರುತ್ತದೆ.

ಕಾಡಾನೆಗಳ ಹಾವಳಿ

ವರ್ಷದಲ್ಲಿ ಒಮ್ಮೆ ನವೆಂಬರ್ – ಜನವರಿ ತಿಂಗಳುಗಳ ಮಧ್ಯದಲ್ಲಿ ಕಾಡಾನೆಗಳ ಹಾವಳಿ ಇರುತ್ತವೆ.

ಅನೈತಿಕ ಚಟುವಟಿಕೆಗಳ ನಿಷೇಧ

ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಮದ್ಯ-ಮಾಂಸ ಸೇವನೆ, ಗುಂಪಾಗಿ ಬಂದು ಪಾರ್ಟಿ ಮಾಡುವುದು, ಗಲಾಟೆ ಮಾಡುವುದು, ಕೀಟಲೆ ಮಾಡುವುದು ಇಲ್ಲವೇ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳನ್ನು ನಿಷೇಧಿಸಿದೆ.

ಪರಿಸರದ ಸ್ವಚ್ಛತೆ

ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ದೇವಸ್ಥಾನದ ಪ್ರದೇಶದಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುತ್ತದೆ.

ವಸತಿಗೃಹಗಳು

ದೇವಸ್ಥಾನದ ಹತ್ತಿರ ವಾಸ್ತವ್ಯ ಮಾಡಲು ಯಾವುದೇ ವಸತಿ ಗೃಹಗಳು ಇರುವುದಿಲ್ಲ. ಮುಂದಿನ ದಿನಗಳಲ್ಲಿ ದೇವಸ್ಥಾನದ ಸೇವಾ ಸಮಿತಿಯವರು ಭಕ್ತರ ಸಹಯೋಗದೊಂದಿಗೆ ವಸತಿಗೃಹಗಳನ್ನು ನಿರ್ಮಿಸಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ.

ಜಾತ್ರಾ

ಪ್ರತಿವರ್ಷ ಶಿವರಾತ್ರಿ ಹಬ್ಬದ ದಿವಸ ಸುತ್ತಮುತ್ತಲ ಗ್ರಾಮದ ಜನರ ಸಹಕಾರದಿಂದ ಇಲ್ಲಿ ವಿಜೃಂಭಣೆಯಿಂದ ಸ್ವಾಮಿಗೆ ಪೂಜೆ, ಹೋಮ-ಹವನ, ರಥೋತ್ಸವ ನಡೆಯುತ್ತದೆ.ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೆ ಈ 8 ದಿವಸಗಳ ಕಾಲವೂ ಉಚಿತ ದಾಸೋಹದ ವ್ಯವಸ್ಥೆ ಇರುತ್ತದೆ.

ದಾಸೋಹ

ಭಕ್ತರು ದಾಸೋಹಕ್ಕಾಗಿ ದವಸ, ಧಾನ್ಯ, ಕಾಳುಗಳು, ಬೇಳೆ, ತರಕಾರಿ ಇತ್ಯಾದಿಗಳನ್ನು ತಂದರೆ ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವರ ಹೆಸರಿನಲ್ಲಿ ಸ್ವೀಕರಿಸಲಾಗುವುದು.

ದಾಸೋಹ ಸೇವೆ

ಯಾವುದೇ ಭಕ್ತರು ತಾವು ಇಷ್ಟಪಟ್ಟ ದಿನದಂದು, ತಮ್ಮ ಹುಟ್ಟುಹಬ್ಬದಂದು, ವಿವಾಹ ವಾರ್ಷಿಕೋತ್ಸವದಂದು, ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು.