ಮುಖಪುಟ

ಶ್ರೀ ವೈದ್ಯನಾಥೇಶ್ವರ ಸ್ವಾಮಿ ಅರೆಯೂರು

ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯವು ಕರ್ನಾಟಕದ ತುಮಕೂರು ತಾಲ್ಲೂಕಿನ ಅರೆಯೂರಿನಲ್ಲಿ ಇರುವ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ಮಾರಕ ರೋಗಗಳಾದ ಕ್ಯಾನ್ಸರ್, ಹೃದಯ ರೋಗಗಳು, ಮತ್ತು ಕಿಡ್ನಿ ವೈಫಲ್ಯದಂತಹ ಖಾಯಿಲೆಗಳಿಗೆ ಔಷಧೋಪಚಾರ ಅಥವಾ ಶಸ್ತ್ರಚಿಕಿತ್ಸೆಗಳಿಲ್ಲದೆ ವಾಸಿ ಮಾಡುತ್ತಿರುವ ಶ್ರದ್ಧಾಸ್ಪದ ಸ್ಥಳವಾಗಿದೆ. ಭಕ್ತರು ಇಲ್ಲಿಗೆ ಬಂದು ದೇವರ ಆರಾಧನೆಯ ಮೂಲಕ ಶ್ರದ್ಧೆ ಮತ್ತು ಶಾಂತಿಯನ್ನು ಅನುಭವಿಸುತ್ತಾರೆ. ಪ್ರತಿ ವರ್ಷ ಜಾತ್ರಾ ಮಹೋತ್ಸವವು 8 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ವೈಭವಯುತ ತೆಪ್ಪೋತ್ಸವ ಹಾಗೂ ಬಾಣಸಲ್ಲು ಪ್ರದರ್ಶನದೊಂದಿಗೆ ವಿಶೇಷ ಆಕರ್ಷಣೆಯಾಗಿ ಉಳಿದಿದೆ.

ಅಮ್ಮಾವಾಸ್ಯೆ, ಪೂರ್ಣಿಮೆ, ಮತ್ತು ಇತರ ಪವಿತ್ರ ದಿನಗಳಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ದೇವಾಲಯದ ಸಮಿತಿಯು ಭಕ್ತರಿಗೆ ಯಜ್ಞ, ಹೋಮ, ಹಾಗೂ ಶಾಂತಿಕರ ಪೂಜಾ ಸೇವೆಗಳ ಸೌಲಭ್ಯ ಒದಗಿಸುತ್ತದೆ.

ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಆಲಯವು ತನ್ನ ಶಾಂತ ಮತ್ತು ಪವಿತ್ರ ವಾತಾವರಣದ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಶ್ರೇಯೋಭಿವೃದ್ಧಿಯನ್ನು ನೀಡುತ್ತಿದೆ. ಭಕ್ತರು ದೇವರ ಆಶೀರ್ವಾದವನ್ನು ಪಡೆಯಲು ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ.

ಆಧುನಿಕ ವೈದ್ಯಪದ್ಧತಿಗೆ, ವಿಜ್ಞಾನಕ್ಕೆ ಸವಾಲಾದ ಕೆಲವು ಪವಾಡ ಸದೃಶ್ಯ ಘಟನೆಗಳು

ಕ್ಯಾನ್ಸರ್‌ನಂಥ ಮಾರಕ ಖಾಯಿಲೆಗಳು ಯಾವುದೇ ವಿಧವಾದ ಔಷಧೋಪಚಾರ ಅಥವಾ ಶಸ್ತ್ರಚಿಕಿತ್ಸೆ ಇಲ್ಲದೆಯೇ ವಾಸಿಯಾಗಿ ಆಧುನಿಕ ವೈದ್ಯಪದ್ಧತಿಗೆ, ವಿಜ್ಞಾನಕ್ಕೆ ಸವಾಲಾದ ವಿಷಯವನ್ನು ಕೇಳಿ ನಂಬುವುದು ಕಷ್ಟವಾದರೂ ಸಹ ಇದು ಸತ್ಯ. ಇದಕ್ಕೆ ನಿದರ್ಶನವಾಗಿ ನಡೆದ ಕೆಲವು ಪವಾಡ ಸದೃಶ್ಯ ಘಟನೆಗಳನ್ನು ಇಲ್ಲಿ ವಿವರಿಸಲಾಗಿವೆ.

ಈ ದೇವಸ್ಠಾನವು ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಶಿವಾಲಯವಾಗಿದೆ

ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಪುರಾತನಕಾಲದ್ದು. ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಭಾರತ ದೇಶದ (ಇಂಡಿಯಾ ದೇಶ) ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದಿಂದ 70 ಕಿ.ಮೀ. ದೂರದಲ್ಲಿರುವ ತುಮಕೂರು ನಗರದದ ನೈರುತ್ಯ ದಿಕ್ಕಿನಲ್ಲಿ ಹಚ್ಚ ಹಸುರಿನಿಂದಾವೃತವಾಗಿರುವ…

ದೇವಾಲಯದ ಸಮಯಗಳು

Morning: 6:00 AM to 7:00 PM
Dasoha Prasadam: 12:30 PM to 2:00 PM

Mangalarathi: 9:00 AM
Maha Mangalarathi: 12:30 PM
Evening Mangalarathi: 6:30 PM Onwards

ಪೂಜಾ - ಸೇವೆಗಳ

  • ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸ, ಶಿವರಾತ್ರಿ, ಅಮಾವಾಸ್ಯೆ, ಮತ್ತು ಇತರ ಪವಿತ್ರ ದಿನಗಳಲ್ಲಿ ವಿಶೇಷ ಪೂಜೆ, ಹೋಮ, ಮತ್ತು ಯಜ್ಞ ಕಾರ್ಯಕ್ರಮಗಳು ಲಭ್ಯವಿದೆ.
  • ಭಕ್ತರು ತಮ್ಮ ಇಷ್ಟದ ದಿನಗಳಲ್ಲಿ ಅಥವಾ ಪ್ರಿಯಜನರ ಹೆಸರಿನಲ್ಲಿ ವಿಶೇಷ ಪೂಜೆಗಳನ್ನು ನಿಗದಿಪಡಿಸಿ ದೇವರ ಆಶೀರ್ವಾದ ಪಡೆಯಬಹುದು.
  • ಅನ್ನ ದಾಸೋಹ ಸೇವೆಯನ್ನು ಭಕ್ತರ ಇಚ್ಛೆಯ ಮೇರೆಗೆ ದೇವಾಲಯದ ವತಿಯಿಂದ ಏರ್ಪಡಿಸಲಾಗುತ್ತದೆ.
  • ಪೂಜಾ ಸೇವೆಗಳಿಗೆ ಮುಂಚಿತವಾಗಿ ಹೆಸರು ನೋಂದಾಯಿಸಲು ಭಕ್ತರಿಗೆ ಅವಕಾಶವಿದೆ.

ಭಕ್ತರ ಅನುಭವಗಳು

News and Events