ಶಿವಾಲಯದ ಪುರಾತನ ಇತಿಹಾಸ
ಈ ದೇವಸ್ಠಾನವು ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಶಿವಾಲಯವಾಗಿದೆ
ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಪುರಾತನಕಾಲದ್ದು. ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಭಾರತ ದೇಶದ (ಇಂಡಿಯಾ ದೇಶ) ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದಿಂದ 70 ಕಿ.ಮೀ. ದೂರದಲ್ಲಿರುವ ತುಮಕೂರು ನಗರದದ ನೈರುತ್ಯ ದಿಕ್ಕಿನಲ್ಲಿ ಹಚ್ಚ ಹಸುರಿನಿಂದಾವೃತವಾಗಿರುವ ಅರೆಯೂರು ಗ್ರಾಮದಲ್ಲಿದೆ. ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಈ ಪ್ರಸಿದ್ಧ ಯಾತ್ರಾಸ್ಥಳವು ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ತುಮಕೂರಿನಿಂದ ಶಿವಮೊಗ್ಗದ ಕಡೆ ಕ್ರಮಿಸುವಾಗ ಸಿಗುವ ಮಲ್ಲಸಂದ್ರ ಗ್ರಾಮದಿಂದ ದಕ್ಷಿಣಕ್ಕೆ 8 ಕಿ.ಮೀ. ದೂರದಲ್ಲಿದೆ.
ಈ ದೇವಸ್ಠಾನವು ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಶಿವಾಲಯವಾಗಿದೆ. ಈ ದೇವಸ್ಥಾನದಲ್ಲಿ ಮಹಾಮಹಿಮೆಯ ಜ್ಯೋತಿರ್ಲಿಂಗವೊಂದಿದೆ. ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ರೋಗಿಗಳು ಬರುತ್ತಿರುತ್ತಾರೆ. ಕಾರಣವೇನೆಂದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರನ್ನು ದೃಢ ಭಕ್ತಿಯಿಂದ ನಂಬಿ ಪೂಜಿಸಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ರೋಗಿಗಳ ಘನಕರ ರೋಗಗಳು ಸಹ ಯಾವುದೇ ಔಷಧೋಪಚಾರ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೂ ಸಹ ಪವಾಡ ಸದೃಶ್ಯವಾಗಿ ವಾಸಿಯಾಗುತ್ತಿರುತ್ತವೆ. ಹೀಗೆ ನೂರಾರು ರೋಗಿಗಳು ಹಾಗೂ ಭಕ್ತರು ಇಲ್ಲಿಗೆ ಬಂದು ದೇವರನ್ನು ನಂಬಿ ಪೂಜಿಸಿ ತಮ್ಮ ಘನಕರ ರೋಗಗಳಾದ ಕ್ಯಾನ್ಸರ್, ಹೃದಯ ಖಾಯಿಲೆಗಳು ಹಾಗೂ ಕಿಡ್ನಿ ವೈಪಲ್ಯ ಖಾಯಿಲೆಗಳನ್ನು ವಾಸಿ ಮಾಡಿಕೊಂಡಿದ್ದಾರೆ ಹಾಗೂ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಅನೇಕ ಖಾಯಿಲೆಗಳು ವಾಸಿಯಾಗುತ್ತಿವೆಯಾದ್ದರಿಂದ ಈ ಮಹಾಮಹಿಮೆಯ ಪುರಾತನ ಜ್ಯೋತಿರ್ಲಿಂಗ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಎಂದೇ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಹಿಂಭಾಗದಲ್ಲಿ ಅಂದರೆ ಅರೆಯೂರು ಕೆರೆಯ ಏರಿಯ ಆಳದಲ್ಲಿ ಉದ್ಭವ ಲಿಂಗುರೂಪಿಯಾದ (ಭೂಮಿಯಿಂದ ಹುಟ್ಟಿದ) ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿದೆ.