ಊಟ ಮತ್ತು ವಸತಿ ಸೌಲಭ್ಯ
ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರಿಂದ ನಿತ್ಯ ಅನ್ನ ದಾಸೋಹ
ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಾಧ್ಯಕ್ಷರಾದ ಅನುಗ್ರಹ ಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಯವರ ಕೃಪಾಶಿರ್ವಾದದೊಂದಿಗೆ ಅನ್ನ ದಾಸೋಹ ಚಾಲನೆಗೊಂಡಿದ್ದು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರು ಇಲ್ಲಿಗೆ ಬರುವ ಭಕ್ತರಿಗೆ ಪ್ರತಿ ದಿನ ಉಚಿತವಾಗಿ ಅನ್ನದಾಸೋಹ (ಊಟದ ವ್ಯವಸ್ಥೆ) ನಡೆಸುತ್ತಿರುತ್ತಾರೆ. ದಾನಿಗಳು ಕೊಡುವ ಧನ ಸಹಾಯ ಮತ್ತು ದಾನವಾಗಿ ಕೊಡುವ ಅಕ್ಕಿ, ಬೇಳೆ, ಮುಂತಾದವುಗಳನ್ನು ಪಡೆದು ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಭಕ್ತರು ದಾಸೋಹಕ್ಕಾಗಿ ದವಸ, ಧಾನ್ಯ, ಕಾಳುಗಳು, ಬೇಳೆ, ತರಕಾರಿ ಇತ್ಯಾದಿಗಳನ್ನು ತಂದರೆ ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವರ ಹೆಸರಿನಲ್ಲಿ ಸ್ವೀಕರಿಸಲಾಗುವುದು. ಯಾವುದೇ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು. ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಮರೆಯದೇ ಪ್ರಸಾದ ಸ್ವೀಕರಿಸಿಕೊಂಡು ಹೋಗಬೇಕಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರ ವಿನಂತಿ.
ದಯವಿಟ್ಟು ಗಮನಿಸಿ: ದೇವಸ್ಥಾನದಲ್ಲಿ ಅಥವಾ ಹತ್ತಿರ ವಾಸ್ತವ್ಯ ಮಾಡಲು ಯಾವುದೇ ವಸತಿ ಗೃಹಗಳು ಇರುವುದಿಲ್ಲ.