ಪವಾಡಕ್ಕೆ ಕಾರಣಗಳು
https://
ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಪವಾಡಕ್ಕೆ ಕಾರಣಗಳು:
ಖಾಯಿಲೆಗಳು ಹೀಗೆ ಪವಾಡ ಸದೃಶವಾಗಿ ವಾಸಿಯಾಗುತ್ತಿರುವುದಕ್ಕೆ ಈ ಕೆಳಕಂಡಂತೆ ಸಾಧು-ಸಂತರು ವಿಶ್ಲೇಷಿಸುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ಉತ್ತರ ಭಾರತದಲ್ಲಿ ಹರಿಯುತ್ತಿರುವ ಗಂಗಾನದಿಯಲ್ಲಿನ ನೀರಿನಲ್ಲಿ ಮಾರಕ ರೋಗಗಳನ್ನು ಉತ್ಪನ್ನ ಮಾಡುವಷ್ಟು ಕಸಕಡ್ಡಿ, ಮೃತ ದೇಹಗಳು ಇತ್ಯಾದಿ ಕಲ್ಮಶಗಳು ಹರಿದು ಬರುತ್ತದೆ. ಗಂಗಾನದಿಯ ನೀರು ರೋಗಗಳನ್ನು ಉತ್ಪತ್ತಿ ಮಾಡಿ ಹರಡುವಷ್ಟು ಕಲುಷಿತವಾಗಿದ್ದರೂ ಸಹ ಜನರು ಈ ನೀರು ಪವಿತ್ರವೆಂದು ಕುಡಿಯುತ್ತಾರೆ ಹಾಗೂ ಸ್ನಾನ ಮಾಡುತ್ತಾರೆ. ಹಾಗಾದರೂ ಇವರಿಗೆ ಯಾವ ವಿಧವಾದ ಖಾಯಿಲೆಗಳು ಸಹ ಬರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಗಂಗಾನದಿ ನೀರಿನಲ್ಲಿ ರೋಗಗಳನ್ನು ಉತ್ಪತ್ತಿ ಮಾಡಿ ಹರಡಲು ಕಾರಣವಾದ ಬ್ಯಾಕ್ಟೀರಿಯಾ ಕ್ರಿಮಿಗಳು ಇರುವುದಿಲ್ಲವೆಂಬ ಅಂಶ ಸಂಶೋಧನೆಗಳಿಂದ ದೃಢಪಟ್ಟಿದೆ.
ಆದರೆ ಬ್ಯಾಕ್ಟೀರಿಯಾ ಕ್ರಿಮಿಗಳು ಗಂಗಾನದಿ ನೀರಿನಲ್ಲಿ ಇಲ್ಲದೇ ಇರುವುದಕ್ಕೆ ಕಾರಣವೇನು? ಎಂಬ ವಿಚಾರ ವೈಜ್ಞಾನಿಕ ಸಂಶೋಧನೆ ಮಾಡಿದರೂ ಸಹ ಕಾರಣಗಳು ತಿಳಿದು ಬಂದಿಲ್ಲವೆಂದು ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ|| ಜಾನ್ ಹೋವಾರ್ಡ್ ಶೋರ್ಪ್ ಹೇಳಿದ್ದಾರೆ.
(Ref: A Book “Autobiography of Yogi” page No. 296, Book published by Yoga Satsanga Society of India, Ranchi – 834001, Jharkhand State.)
Click Here for Related Information
ಆದರೆ ಆತ್ಮಜ್ಞಾನಿಗಳು ಹೇಳುವುದೇನೆಂದರೇ ಗಂಗಾನದಿಯ ನೀರಿನಲ್ಲಿ ಇರಬೇಕಾದ ಬ್ಯಾಕ್ಟೀರಿಯಗಳು ಹಿಮಾಲಯದ ಋಷಿಗಳ ತಪೋತರಂಗಗಳಿಂದ ನಾಶವಾಗಿವೆ ಹಾಗೂ ಇಂದಿಗೂ ನಿರಂತರವಾಗಿ ನಾಶವಾಗುತ್ತಿವೆ ಎಂದು. ಆದರೆ ವಿಜ್ಞಾನಕ್ಕೆ ತಿಳಿಯದೇ ಇರುವುದೆಲ್ಲಾ ಆತ್ಮಜ್ಞಾನಕ್ಕೆ ತಿಳಿಯುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.
ಆತ್ಮಜ್ಞಾನ:
ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವಿರುವ ಜಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ವಾಸಿಸುತ್ತಿದ್ದ ಋಷಿಗಳ ತಪೋತರಂಗಗಳ ಪ್ರಭಾವ ಈಗಲೂ ಇರಬಹುದಾದ ಸಾಧ್ಯತೆ ಇದ್ದು ಋಷಿ ಮುನಿಗಳು ಈಗಲೂ ಇಲ್ಲಿ ಸೂಕ್ಷ್ಮ ಶರೀರಧಾರಿಗಳಾಗಿ ವಾಸಿಸುತ್ತಿದ್ದಾರೆ ಎಂಬ ಪ್ರತೀತಿಯಿದೆ. ಅದರಲ್ಲೂ ಮುಖ್ಯವಾಗಿ ಇಲ್ಲಿರುವ ಜ್ಯೋತಿರ್ಲಿಂಗದಲ್ಲಿನ ವಿಶ್ವಸ್ಥ ದಿವ್ಯ ಶಕ್ತಿಯ (Cosmic Divine Power) ಹೆಚ್ಚಿನ ಪ್ರಭಾವವಿದೆ. ಋಷಿ ಮುನಿಗಳ ತಪೋತರಂಗಗಳ ಹಾಗು ಜ್ಯೋತಿರ್ಲಿಂಗದಲ್ಲಿನ ವಿಶ್ವಸ್ಥ ದಿವ್ಯ ಶಕ್ತಿಯ ಪ್ರಭಾವಗಳಿಂದ ರೋಗಾಣುಗಳು ನಾಶವಾಗಿ ಖಾಯಿಲೆಗಳು ವಾಸಿಯಾಗುತ್ತವೆ ಎಂದು ಜ್ಞಾನಿಗಳು ಹೇಳುತ್ತಾರೆ.
ಹಿಂದಿನ ಕಾಲದಲ್ಲಿ ಈ ಗ್ರಾಮದಲ್ಲಿ ಖಾಯಿಲೆಯಾದವರನ್ನು ಕರೆತಂದು ಈ ದೇವಸ್ಥಾನದ ಪ್ರಾಂಗಣದಲ್ಲಿ ಹತ್ತಾರು ದಿವಸ ವಾಸವಾಗಿದ್ದು ತಮ್ಮ ಖಾಯಿಲೆಗಳನ್ನು ವಾಸಿ ಮಾಡಿಕೊಂಡು ಹೋಗುತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ.