ಪೂಜಾ ಕಾರ್ಯಗಳು ಮತ್ತು ಇತರ ಸೇವೆಗಳ ಬಗ್ಗೆ ಮಾಹಿತಿ.
- ಆಸಕ್ತ ಭಕ್ತರು ಶಿವರಾತ್ರಿಯ ದಿನದ ಅಥವಾ ಯಾವುದೇ ಮುಖ್ಯ ಹಬ್ಬ-ಹರಿದಿನಗಳಂದು, ಅಮಾವಾಸ್ಯೆ ಪೂಜೆಗಳಂದು ವಿಶೇಷ ಪೂಜೆ, ಯಜ್ಞ-ಯಾಗಾದಿ ಹೋಮ ದಾಸೋಹಗಳ ಸೇವೆಗಾಗಿ ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಆದಷ್ಟು ಮುಂಚಿತವಾಗಿಯೇ ಹೆಸರು ನೊಂದಾಯಿಸಿಕೊಳ್ಳಬೇಕು.
- ವರ್ಷಕ್ಕೊಮ್ಮೆ 8 ದಿವಸಗಳ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ. ಜಾತ್ರೆಯ ಕೊನೆಯ ದಿವಸ ವೈಭವಯುಕ್ತ ತೆಪ್ಪೋತ್ಸವ ನಡೆಯುತ್ತದೆ. ಕೊನೆಯಲ್ಲಿ ಅಕರ್ಷಕ ಬಾಣ-ಬಿರುಸುಗಳ ಪ್ರದರ್ಶನ ಇರುತ್ತದೆ.
- ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಹೆಸರಲ್ಲಿ ವಾರ್ಷಿಕ ಪೂಜೆಗಾಗಿ ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಹೆಸರು ನೊಂದಾಯಿಸಬಹುದು. ಭಕ್ತರು ಸೂಚಿಸಿದ ವಿಳಾಸಕ್ಕೆ ದೇವಾಲಯದ ವತಿಯಿಂದ ಪ್ರಸಾದ / ಸಂದೇಶ ಪತ್ರಗಳ ರವಾನೆಯಾಗುತ್ತದೆ.
- ಯಾವುದೇ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು.
ವಿವಾಹಾದಿ ಮಂಗಳ ಕಾರ್ಯಗಳು:
|