ಭಕ್ತಾದಿಗಳಿಗೆ ವಿಶೇಷ ಸೂಚನೆ

  • ತುಮಕೂರಿನಿಂದ ಅರೆಯೂರಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಪ್ರತಿ ಗಂಟೆಗೊಮ್ಮೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸರ್ಕಾರಿ ಬಸ್‌ಗಳ ವ್ಯವಸ್ಥೆಯಿದೆ.
  • ಜಾತ್ರಾ-ರಥೋತ್ಸವಗಳ ದಿನದಂದು KSRTC ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಲಾಗುತ್ತದೆ.
  • ದೇವಸ್ಥಾನದ ಸುತ್ತಮುತ್ತಲ ಪ್ರದೇಶವು ಪ್ಲಾಸ್ಟಿಕ್ ರಹಿತ ಪ್ರದೇಶವಾಗಿರುತ್ತದೆ.
  • ವರ್ಷದಲ್ಲಿ ಒಮ್ಮೆ ನವೆಂಬರ್ – ಜನವರಿ ತಿಂಗಳುಗಳ ಮಧ್ಯದಲ್ಲಿ ಕಾಡಾನೆಗಳ ಹಾವಳಿ ಇರುತ್ತವೆ.
  • ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಮದ್ಯ-ಮಾಂಸ ಸೇವನೆ, ಗುಂಪಾಗಿ ಬಂದು ಪಾರ್ಟಿ ಮಾಡುವುದು, ಗಲಾಟೆ ಮಾಡುವುದು, ಕೀಟಲೆ ಮಾಡುವುದು ಇಲ್ಲವೇ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳನ್ನು ನಿಷೇಧಿಸಿದೆ.
  • ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ದೇವಸ್ಥಾನದ ಪ್ರದೇಶದಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುತ್ತದೆ.
  • ದೇವಸ್ಥಾನದ ಹತ್ತಿರ ವಾಸ್ತವ್ಯ ಮಾಡಲು ಯಾವುದೇ ವಸತಿ ಗೃಹಗಳು ಇರುವುದಿಲ್ಲ. ಮುಂದಿನ ದಿನಗಳಲ್ಲಿ ದೇವಸ್ಥಾನದ ಸೇವಾ ಸಮಿತಿಯವರು ಭಕ್ತರ ಸಹಯೋಗದೊಂದಿಗೆ ವಸತಿಗೃಹಗಳನ್ನು ನಿರ್ಮಿಸಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ.
  • ಪ್ರತಿವರ್ಷ ಶಿವರಾತ್ರಿ ಹಬ್ಬದ ದಿವಸ ಸುತ್ತಮುತ್ತಲ ಗ್ರಾಮದ ಜನರ ಸಹಕಾರದಿಂದ ಇಲ್ಲಿ ವಿಜೃಂಭಣೆಯಿಂದ ಸ್ವಾಮಿಗೆ ಪೂಜೆ, ಹೋಮ-ಹವನ, ರಥೋತ್ಸವ ನಡೆಯುತ್ತದೆ.
  • ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೆ ಈ 8 ದಿವಸಗಳ ಕಾಲವೂ ಉಚಿತ ದಾಸೋಹದ ವ್ಯವಸ್ಥೆ ಇರುತ್ತದೆ.
  • ಭಕ್ತರು ದಾಸೋಹಕ್ಕಾಗಿ ದವಸ, ಧಾನ್ಯ, ಕಾಳುಗಳು, ಬೇಳೆ, ತರಕಾರಿ ಇತ್ಯಾದಿಗಳನ್ನು ತಂದರೆ ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವರ ಹೆಸರಿನಲ್ಲಿ ಸ್ವೀಕರಿಸಲಾಗುವುದು.
  • ಯಾವುದೇ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು.
CALL ME
+
Call me!