ಶ್ರೀ ಅಶೋಕ್ ಕುಮಾರ್ ಜೈನ್, 1ನೇ ಮುಖ್ಯ ರಸ್ತೆ, ಜೈನ್ ಟೆಂಪಲ್ ಹತ್ತಿರ, ತುಮಕೂರು.
ನನಗೆ ಲಿವರ್ ಸಿರೋಸಿಸ್ ಎಂಬ ಖಾಯಿಲೆಯಾಗಿ ಎರಡು ವರ್ಷದಿಂದ ತೊಂದರೆ ಪಡುತ್ತಿದ್ದೆ. ನನ್ನ ಪಿತ್ತಜನಕಾಂಗ (Liver) ನಿಷ್ಕ್ರೀಯವಾಗಿದೆ ಎಂದು ಡಾಕ್ಟರ್ ಹೇಳಿದ್ದರು. ಇದಕ್ಕೆ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಮಾತ್ರ ಖಾಯಿಲೆ ವಾಸಿಯಾಗುತ್ತದೆ ಎಂದು ಡಾಕ್ಟರ್‌ಗಳು ಹೇಳಿದ್ದರು. ಆದರೆ ಅಂತಹ ಅನುಭವ ತಜ್ಞ ವೈದ್ಯರನ್ನು ಎಲ್ಲಾ ಕಡೆ ಹುಡುಕಿದರು ಯಾರೂ ಸಿಕ್ಕಿರಲಿಲ್ಲ. ನನಗೆ ದಿಕ್ಕೇ ತೋಚದಾಯಿತು. ಅದೇ ಸಮಯದಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರಿಗೆ ಮೊರೆ ಹೊಕ್ಕರೆ ಖಾಯಿಲೆ ವಾಸಿಯಾಗುತ್ತದೆ ಎಂಬ ವಿಚಾರವನ್ನು ಜನರ ಮೂಲಕ ತಿಳಿದುಕೊಂಡು, ನಾವು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿಸಿ ನಾನು ದೇವರನ್ನು ಈ ರೀತಿ ಪ್ರಾರ್ಥಿಸಿದೆ ಸ್ವಾಮಿ ನೀನು ನನ್ನ ಖಾಯಿಲೆಯನ್ನು ವಾಸಿ ಮಾಡು ಅಥವಾ ಖಾಯಿಲೆ ವಾಸಿ ಮಾಡಿಸಿಕೊಳ್ಳುವುದಕ್ಕೆ ದಾರಿ ತೋರಿಸುವಂತೆ ಪ್ರಾರ್ಥಿಸಿದೆ. ಹೀಗೆ ನಾನು ದೇವಸ್ಥಾನಕ್ಕೆ ಹೋಗಿ ಬಂದ 5 ದಿವಸ ಆದ ಮೇಲೆ ನನ್ನ ಮಗಳು ಇಂಟರ್‌ನೆಟ್ ನಲ್ಲಿ ನೋಡುತ್ತಿದ್ದಾಗ ಒಂದು ವೆಬ್ ಸೈಟ್ ನಲ್ಲಿ ಲಿವರ್ ಸಿರೋಸಿಸ್ ಖಾಯಿಲೆಗೆ ಶಸ್ತ್ರ ಚಿಕಿತ್ಸೆಯನ್ನು ಡೆಲ್ಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಮಾಡುವುದಾಗಿ ಗೊತ್ತಾಗಿ ನಾವು ಡೆಲ್ಲಿಗೆ ಹೋಗಿ ಗಂಗಾರಾಮ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಾನು ಈಗ ಆರೋಗ್ಯವಾಗಿದ್ದೇನೆ. ನನ್ನ ಖಾಯಿಲೆ ವಾಸಿ ಮಾಡಲು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರೇ ನನಗೆ ದಾರಿ ತೋರಿದನೆಂದು ನಂಬಿದ್ದೇನೆ. ಆದ್ದರಿಂದ ನಾನು ಈಗಲೂ ಆಗಾಗ್ಗೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದೇನೆ.