ಸ್ಥಳ ಪುರಾವೆಗಳು
ಋಷಿಮುನಿಗಳು ಇಲ್ಲಿ ಆಶ್ರಮ ಮಾಡಿಕೊಂಡು
ತಪಸ್ಸು ಮಾಡುತ್ತಿದ್ದಾರೆಂದು ಪುರಾವೆ.
1986ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲು ದೇವಸ್ಥಾನದ ಮಹಾದ್ವಾರ ಕೆಡವಿ ಪಾಯವನ್ನು ಅಗೆಯುತ್ತಿದ್ದಾಗ (Foundation) ಸಮಾಧಿಗಳು (ಮಾನವರ ಮೃತದೇಹಗಳನ್ನು ಮಣ್ಣಿನಲ್ಲಿ ಹೂತಿರುವುದು) ಸಿಕ್ಕಿದವು. ಅವುಗಳನ್ನು ಅಗೆದಾಗ ಮಾನವರ ಅಸ್ಥಿಪಂಜರದ ಪಳೆಯುಳಿಕೆಗಳು, ಮನುಷ್ಯರ ತಲೆಬುರುಡೆಗಳು ಇತರೆ ಮಣ್ಣಿನ ಮಡಕೆ ಮುಂತಾದವುಗಳು ಹಾಗೂ ಕಂಚಿನ ಸಾಮಾನುಗಳು ದೊರೆತವು. ಆದ್ದರಿಂದ ಇಲ್ಲಿ ಮನುಷ್ಯರು ವಾಸ ಮಾಡುತ್ತಿದ್ದರೆಂಬುದನ್ನು ಊಹಿಸಬಹುದು. ಹೀಗೆ ಇಲ್ಲಿ ವಾಸ ಮಾಡಿಕೊಂಡಿದ್ದವರು ಋಷಿಗಳೆಂದು ನಿರ್ದಿಷ್ಟವಾಗಿ ಹೇಳಬಹುದು. ಏಕೆಂದರೆ ಸಂಸಾರಿಗಳಾದ ಸಾಮಾನ್ಯ ಜನರು ದೇವಸ್ಥಾನದ ಮುಂದೆ ಹಾಗೂ ದೇವಸ್ಥಾನಕ್ಕೆ ಇಷ್ಟು ಹತ್ತಿರದಲ್ಲಿ ಸಾಮಾನ್ಯ ಜನರು ವಾಸ ಮಾಡುವುದಿಲ್ಲ. ಆದ್ದರಿಂದ ಇಲ್ಲಿ ವಾಸಿಸುತ್ತಿದ್ದವರು ಋಷಿಗಳೆಂದೇ ಖಚಿತವಾಗಿ ಹೇಳಬಹುದು
ಅರೆಯೂರು ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಒಂದು ಸಂತರ ಸಮಾಧಿ ಸಿಗುತ್ತದೆ. ಇದನ್ನು ಶ್ರೀ ಗದ್ದಿಗಪ್ಪನವರ ಸಮಾಧಿ ಎಂದು ಕರೆಯುತ್ತಾರೆ. ಈಗ್ಗೆ 70-80 ವರ್ಷಗಳ ಹಿಂದೆ ಈ ಸಮಾಧಿಯಿಂದ ಪರಿಮಳ ಬೀರುವ ಸುವಾಸನೆ ಬರುತ್ತಿತ್ತೆಂದು ವಯಸ್ಸಾದ ಹಿರಿಯರು ಹೇಳುತ್ತಾರೆ. ಆದರೆ ಈಗ ಯಾವ ಸುವಾಸನೆಯೂ ಬರುತ್ತಿಲ್ಲ. | 19ನೇ ಶತಮಾನದ ಆದಿಭಾಗದಲ್ಲಿ ಶ್ರೀ ಆದವೇನ ಸ್ವಾಮಿಗಳು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಮಠ ಮಾಡಿಕೊಂಡು ವಾಸ ಮಾಡಿಕೊಂಡು ಇದ್ದರೆಂದು ಹೇಳುತ್ತಾರೆ. ಈಗ ಅವರಿಲ್ಲ; ಅವರ ಸಮಾಧಿ ಇದೆ. |
ಆನೆಗಳ ಹಿಂಡು:
ಈ ಸ್ಥಳ ಹಿಂದೆ ದಟ್ಟವಾದ ಅರಣ್ಯದಿಂದ ಆವೃತವಾಗಿತ್ತು ಎನ್ನುವ ಮಾತಿಗೆ ಪುರಾವೆಯಾಗಿ ಪ್ರತಿವರ್ಷ ಆನೆಗಳ ಹಿಂಡು ಬೇರೆ ಕಾಡುಗಳಿಂದ ಒಂದು ನಿರ್ದಿಷ್ಟ ಮಾರ್ಗವಾಗಿ ಅರಿಯೂರು ಗ್ರಾಮದ ಸುತ್ತ-ಮುತ್ತಲ ಪ್ರದೇಶಕ್ಕೆ ಮೇಯಲು ಬರುತ್ತವೆ. ಹಾಗೆ ಬಂದ ಆನೆಗಳು ಕೆರೆಗೆ ಬಂದು ಈಜಾಡಿಕೊಂಡು ಯಾರಿಗೂ ತೊಂದರೆ ಮಾಡದೆ ಬಂದ 2-3 ದಿನಗಳಲ್ಲಿ ತಮ್ಮ ಪಾಡಿಗೆ ತಾವು ಬೇರೆಡೆಗೆ ಹೊರಟು ಹೋಗುತ್ತವೆ.