ಹೂವಿನ ಪ್ರಸಾದ

0 Comments

areyuru006.jpg 

ದೇವರ ಹೂವಿನ ಪ್ರಸಾದದಿಂದ ಭಕ್ತರು ಫಲಾಫಲಗಳನ್ನು ತಿಳಿಯುವ ವಿಧಾನ

  ಭಕ್ತರು ಇಲ್ಲಿಗೆ ಬಂದು ದೇವರಿಗೆ ಪೂಜೆ-ಅಭಿಷೇಕ ಮಾಡಿಸಿ, ದೇವರಲ್ಲಿ “ನನ್ನ ಖಾಯಿಲೆ ವಾಸಿಯಾಗುತ್ತದೆಯೇ? ನನ್ನ ಇಷ್ಟಾರ್ಥಗಳು ಈಡೇರುತ್ತವೆಯೇ?” ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲೇ ಕೇಳಿಕೊಂಡು ಅರ್ಚಕರಿಗೆ ದೇವರ ಮೇಲಣ ಪ್ರಸಾದ ಕೊಡುವಂತೆ ವಿನಂತಿಸಿದರೆ ಅರ್ಚಕರು ಭಕ್ತಿಯಿಂದ ಲಿಂಗುವಿನ ಮೇಲೆ ಇಟ್ಟಿರುವ ಬಿಡಿ ಹೂವುಗಳನ್ನು ಮೂರು ಬೆರಳಿನಲ್ಲಿ ಪ್ರಸಾದ ರೂಪದಲ್ಲಿ ತಂದುಕೊಡುತ್ತಾರೆ.

ಆಗ ನಮಗೆ ಪ್ರಸಾದವಾಗಿ ಬಂದ ಹೂವುಗಳು “ಬೆಸಸಂಖ್ಯೆ”ಯಲ್ಲಿ (Odd numbers) ಅಂದರೆ 1, 3, 5, 7, 9, .. ರಂತೆ ಇದ್ದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಅರ್ಥ. ಅದೇ “ಸಮಸಂಖ್ಯೆ”ಯಲ್ಲಿ (Even Numbers) ಅಂದರೆ 2, 4, 6, 8, .. ರಂತೆ ಹೂವುಗಳು ಬಂದರೆ ಖಾಯಿಲೆ ವಾಸಿಯಾಗುವುದಿಲ್ಲ ಅಥವಾ ಕಾರ್ಯ ಆಗುವುದಿಲ್ಲ.

ಆದರೂ ಬಿಡದೆ ಭಕ್ತರು ದೃಢಭಕ್ತಿಯಿಂದ ಆಗಾಗ್ಯೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ದೇವರಿಗೆ ಅಭಿಷೇಕ ಮಾಡಿಸುತ್ತಿದ್ದರೆ 5-6 ತಿಂಗಳಲ್ಲಿ ಶುಭ ಸೂಚನೆ ಕಂಡು ಬಂದು ದೇವರ ಅನುಗ್ರಹ ಆಗುತ್ತದೆ.

  

Related Posts

ಸ್ಥಳ ಪುರಾವೆಗಳು

ಋಷಿಮುನಿಗಳು ಇಲ್ಲಿ ಆಶ್ರಮ ಮಾಡಿಕೊಂಡುತಪಸ್ಸು ಮಾಡುತ್ತಿದ್ದಾರೆಂದು ಪುರಾವೆ.1986ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ…

ಪೌರಾಣಿಕ ಹಿನ್ನೆಲೆ

  ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನವಿರುವ ಪ್ರದೇಶವು ಒಂದು ತಪೋಭೂಮಿಯಾಗಿದೆ. ಅರೆಯೂರಿನಲ್ಲಿರುವ ಶ್ರೀ ವೈದ್ಯನಾಥೇಶ್ವರ…

ದೇವರ ಸರ್ಪ

.ಇದೇ ದೇವಾಲಯದ ಜಾಗದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ…