ಸ್ಥಳ ಪುರಾವೆಗಳು

ಋಷಿಗಳ ಆಶ್ರಮಗಳ ಪುರಾವೆ

1986ರಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಮಹಾದ್ವಾರದ ಪಾಯದ ಅಗೆತೆಯಲ್ಲಿ, ಮನುಷ್ಯರ ಅಸ್ಥಿಪಂಜರ, ತಲೆಬುರುಡೆಗಳು, ಮಡಕೆಗಳು ಮತ್ತು ಕಂಚಿನ ಸಾಮಾನುಗಳು ಪತ್ತೆಯಾಗಿವೆ. ಈ ಪುರಾವೆಗಳು ಪ್ರಾಚೀನ ಕಾಲದಲ್ಲಿ ಇಲ್ಲಿ ಮನುಷ್ಯ ವಾಸವಿದ್ದೇನೂ, ಮತ್ತು ಅವರು ಋಷಿಮುನಿಗಳಾಗಿರಬಹುದೆಂಬುದಕ್ಕೆ ಸಾಕ್ಷಿಯಾಗಿವೆ.

ಶ್ರೀ ಗದ್ದಿಗಪ್ಪನವರ ಸಮಾಧಿ

ಅರೆಯೂರು ಗ್ರಾಮ ಪ್ರವೇಶಿಸುವಾಗ ಶ್ರೀ ಗದ್ದಿಗಪ್ಪನವರ ಸಮಾಧಿ ಕಾಣಸಿಗುತ್ತದೆ. 70-80 ವರ್ಷಗಳ ಹಿಂದೆ ಈ ಸಮಾಧಿಯಿಂದ ವಿಶೇಷವಾದ ಪರಿಮಳ ಬೀರುವ ಸುವಾಸನೆ ಬರುತ್ತಿತ್ತು ಎಂಬ ಮಾಹಿತಿ ಹಿರಿಯರು ನೀಡುತ್ತಾರೆ. ಇದು ಈ ಪ್ರದೇಶದ ಆಧ್ಯಾತ್ಮಿಕ ಮಹತ್ವವನ್ನು ಸೂಚಿಸುತ್ತದೆ.

ಶ್ರೀ ಆದವೇನ ಸ್ವಾಮಿಗಳ ಮಠ

19ನೇ ಶತಮಾನದ ಆರಂಭದಲ್ಲಿ ಶ್ರೀ ಆದವೇನ ಸ್ವಾಮಿಗಳು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಮಠವನ್ನು ಸ್ಥಾಪಿಸಿ ವಾಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಅವರ ಮಠ ಮತ್ತು ಸಮಾಧಿ ಈಗಲೂ ಇಲ್ಲಿ ಅಸ್ಥಿತ್ವದಲ್ಲಿವೆ, ಇದು ಆಧ್ಯಾತ್ಮಿಕ ಪರಂಪರೆಯನ್ನು ಸಾರುತ್ತದೆ.

ಆನೆಗಳ ಹಿಂಡು - ಅರಣ್ಯ ಪುರಾವೆ

ಈ ಪ್ರದೇಶದ ದಟ್ಟವಾದ ಅರಣ್ಯದ ಪುರಾತನ ಪರಿಸರದ ಸ್ಮರಣೆಯಾಗಿ, ಪ್ರತಿ ವರ್ಷ ಬೇರೆ ಕಾಡುಗಳಿಂದ ಆನೆಗಳ ಹಿಂಡು ಈ ಪ್ರದೇಶಕ್ಕೆ ಮೇಯಲು ಬಂದು ಹತ್ತಿರದ ಕೆರೆಯಲ್ಲಿ ಈಜಾಡಿ, ಕೆಲವು ದಿನಗಳ ನಂತರ ತಾವು ಬಂದು ಹೋದ ದಾರಿಯ ಮೂಲಕವೇ ಮರಳಿ ತೆರಳುತ್ತವೆ.

CALL ME
+
Call me!