ಹಾಲುಮಲ್ಲೇಶ್ವರ ಗುಡಿ
ಶ್ರೀ ಹಾಲುಮಲ್ಲೇಶ್ವರ ಸ್ವಾಮಿ ಗುಡಿ
ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಾಲಯದ ಹಿಂಭಾಗದಲ್ಲಿ, ಕೆರೆಯ ಏರಿಯ ಆಳದಲ್ಲಿ ಶ್ರೀ ಹಾಲುಮಲ್ಲೇಶ್ವರ ಸ್ವಾಮಿಯ ಒಂದು ಚಿಕ್ಕ ದೇವಾಲಯವಿದೆ. ಈ ದೇವಾಲಯದಲ್ಲಿರುವ ಲಿಂಗವು ಮನುಷ್ಯರು ಪ್ರತಿಷ್ಠಾಪಿಸಿದದ್ದು ಅಲ್ಲ, ಬದಲಾಗಿ ಭೂಮಿಯಿಂದ ಸ್ವತಃ ಹುಟ್ಟಿದ ಉದ್ಭವ ಲಿಂಗ.
ಆದಿಯಲ್ಲಿ ಏನಾಯಿತು?
ಪೂರ್ವಕಾಲದಲ್ಲಿ ಈ ಪ್ರದೇಶವು ಅರಣ್ಯವಿದ್ದಾಗ, ದೇವಾಲಯದ ಸ್ಥಳದಲ್ಲಿ ಒಂದು ಹುತ್ತವಿತ್ತು. ಹತ್ತಿರದ ಮಲ್ಲಪ್ಪನಹಳ್ಳಿಯ ರೈತರ ದನಗಳು ಅರಣ್ಯಕ್ಕೆ ಮೇಯಲು ಹೋಗುತ್ತಿದ್ದರು. ಈ ದನಗಳ ಪೈಕಿ ಹಸುವೊಂದು ಪ್ರತಿದಿನವೂ ಈ ಹುತ್ತದ ಮೇಲೆ ನಿಂತು, ತನ್ನ ಕೆಚ್ಚಲಿನಿಂದ ಹಾಲನ್ನು ಧಾರಾಕಾರವಾಗಿ ಸುರಿಸುತ್ತಿತ್ತಂತೆ. ಈ ಅಸಾಮಾನ್ಯ ದೃಶ್ಯವನ್ನು ನೋಡಿ ಕುತೂಹಲಗೊಂಡ ಜನರು ಹುತ್ತವನ್ನು ಅಗೆದರು. ಅಲ್ಲಿ ಒಂದು ಸಣ್ಣದಾದ ೫-೬ ಅಂಗುಲ ಎತ್ತರದ ಲಿಂಗು ಗೋಚರಿಸಿತು. ಇದನ್ನು ಪವಿತ್ರ ಸ್ಥಳವೆಂದು ಮನಗಂಡ ಜನರು, ಅಲ್ಲಿ ಒಂದು ಚಿಕ್ಕದಾದ ಗುಡಿಯನ್ನು ನಿರ್ಮಿಸಿ ಪೂಜಿಸಲು ಪ್ರಾರಂಭಿಸಿದರು.
ದೇವಾಲಯದ ಮತ್ತೊಂದು ಪುರಾಣಕಥೆ
ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಋಷಿಗಳು ಆಶ್ರಮವನ್ನು ಮಾಡಿಕೊಂಡಿದ್ದರು. ಅವರು ತಮ್ಮ ದಿವ್ಯ ದೃಷ್ಟಿಯಿಂದ ಭೂಮಿಯಲ್ಲಿ ಅಡಗಿದ್ದ ಲಿಂಗುವನ್ನು ಕಂಡು ಅದನ್ನು ಪತ್ತೆ ಹಚ್ಚಿದರು. ಲಿಂಗನ್ನು ಅಗೆದು ತೆಗೆದ ಸಮಯದಲ್ಲಿ, ಅಲ್ಲಿ ಹಾಲು ಉಕ್ಕಿ ಹರಿಯಿತು. ಈ ಪವಿತ್ರ ಘಟನೆಯ ನೆನಪಿಗಾಗಿ ಈ ಲಿಂಗವನ್ನು ಹಾಲುಮಲ್ಲೇಶ್ವರ ಎಂದು ಕರೆಯಲಾಯಿತು. ಋಷಿಗಳು ಈ ಸ್ಥಳದಲ್ಲಿ ಸಣ್ಣದಾದ ದೇವಾಲಯವನ್ನು ನಿರ್ಮಿಸಿ ಲಿಂಗವನ್ನು ಪೂಜಿಸುತ್ತಿದ್ದರು.