ಪೂಜಾ – ಸೇವೆಗಳ ಬಗ್ಗೆ ಮಾಹಿತಿ

ಪೂಜಾ - ಸೇವೆಗಳ ಬಗ್ಗೆ ಮಾಹಿತಿ

ಪೂಜಾ ಕಾರ್ಯಗಳು ಮತ್ತು ಸೇವೆಗಳ ವಿವರ
ವಿಶೇಷ ಪೂಜಾ ಸೇವೆ

ಆಸಕ್ತ ಭಕ್ತರು ಶಿವರಾತ್ರಿಯ ದಿನದ ಅಥವಾ ಯಾವುದೇ ಮುಖ್ಯ ಹಬ್ಬ-ಹರಿದಿನಗಳಂದು, ಅಮಾವಾಸ್ಯೆ ಪೂಜೆಗಳಂದು ವಿಶೇಷ ಪೂಜೆ, ಯಜ್ಞ-ಯಾಗಾದಿ ಹೋಮ ದಾಸೋಹಗಳ ಸೇವೆಗಾಗಿ ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಆದಷ್ಟು ಮುಂಚಿತವಾಗಿಯೇ ಹೆಸರು ನೊಂದಾಯಿಸಿಕೊಳ್ಳಬೇಕು.

ಜಾತ್ರಾ ಉತ್ಸವ

ವರ್ಷಕ್ಕೊಮ್ಮೆ 8 ದಿವಸಗಳ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ. ಜಾತ್ರೆಯ ಕೊನೆಯ ದಿವಸ ವೈಭವಯುಕ್ತ ತೆಪ್ಪೋತ್ಸವ ನಡೆಯುತ್ತದೆ. ಕೊನೆಯಲ್ಲಿ ಅಕರ್ಷಕ ಬಾಣ-ಬಿರುಸುಗಳ ಪ್ರದರ್ಶನ ಇರುತ್ತದೆ.

ವಾರ್ಷಿಕ ಪೂಜೆ

ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಹೆಸರಲ್ಲಿ ವಾರ್ಷಿಕ ಪೂಜೆಗಾಗಿ ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಹೆಸರು ನೊಂದಾಯಿಸಬಹುದು. ಭಕ್ತರು ಸೂಚಿಸಿದ ವಿಳಾಸಕ್ಕೆ ದೇವಾಲಯದ ವತಿಯಿಂದ ಪ್ರಸಾದ / ಸಂದೇಶ ಪತ್ರಗಳ ರವಾನೆಯಾಗುತ್ತದೆ.

ಅನ್ನದಾಸೋಹ

ಯಾವುದೇ ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು.

ವಿವಾಹಾದಿ ಮಂಗಳ ಕಾರ್ಯಗಳು
  • ದೇವರ ಸನ್ನಿಧಿಯಲ್ಲಿ ಲಿಂಗದೀಕ್ಷೆ, ನಾಮಕರಣ, ವಿವಾಹಾದಿ ಮಂಗಳ ಕಾರ್ಯಗಳನ್ನು ಮಾಡಲು ಆಪೇಕ್ಷೆ ಪಡುವ ಯಾವುದೇ ಭಕ್ತರು ದೇವಾಲಯದ ವತಿಯಿಂದ ನಿಗಧಿಪಡಿಸಿದ ಹಣಕೊಟ್ಟು ಆದಷ್ಟು ಮುಂಚಿತವಾಗಿಯೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು.
  • ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರು ನಿಗಧಿ ಪಡಿಸಿದ ಸಂಖ್ಯೆಯಷ್ಟೇ ಜನರು ಬರಬೇಕು.
  • ನಿಗಧಿ ಪಡಿಸಿದ ಜನಸಂಖ್ಯೆಗಿಂತ ಅನೇಕರು ಬರುವವರಿದ್ದರೇ ಅ ಕಾರ್ಯಕ್ರಮದ ಸಂಬಂಧಪಟ್ಟವರು ತಮ್ಮ ಹೆಸರು ನೊಂದಾಯಿಸಿಕೊಳ್ಳುವಾಗಲೇ ತಿಳಿಸಿರಬೇಕು.